ಕೃಷ್ಣ-ಲೀಲಾ ಹಾಡುಗಳಿಗೆ ಪವರ್‌ಸ್ಟಾರ್+ರಿಯಲ್‌ಸ್ಟಾರ್ !
Posted date: 29 Wed, Oct 2014 – 10:02:05 AM

ಸ್ಯಾಂಡಲ್‌ವುಡ್ ಕೃಷ್ಣ, ಅಜಯ್ ರಾವ್ ಚೊಚ್ಚಲ ನಿರ್ಮಾಣದ ಶ್ರೀ ಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಬಚ್ಚನ್ ನಂತರ, ಶಶಾಂಕ್ ನಿರ್ದೇಶಿಸುತ್ತಿರುವ ಅದ್ದೂರಿ ಚಿತ್ರ ಕೃಷ್ಣ-ಲೀಲಾ ಚಿತ್ರದ ಒಂದು ವಿಶೇಷವಾದ ಹಾಡನ್ನು ಕಳೆದ ವಾರವಷ್ಟೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ರವರು ಹಾಡಿದ್ದರು. ಇದೀಗ ಇನ್ನೊಂದು ಹಾಡನ್ನು ರಿಯಲ್‌ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಫೋನಮ್ಮುಂಗು ಸಿಮ್ಮಪ್ಪಂಗು ಹುಟ್ಟಿದ್ ಮಕ್ಳು ಇವ್ರೇನೇ ಕಾಮನ್ ಕೃಷ್ಣ ಲೀಲಾ! ಎಂದು ಶುರುವಾಗುವ ಈ ವಿಶೇಷವಾದ ಹಾಡನ್ನು ನೆನ್ನೆ ಬಾಲಾಜಿ ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ಹಾಡಿನ ರಾಗ ಸಂಯೋಜನೆ ಮತ್ತು ಸಾಹಿತ್ಯದ ಕುರಿತು ವಿಶೇಷವಾದ ಮೆಚ್ಚುಗೆ ವ್ಯಕ್ತಪಡಿಸಿದ ಉಪೇಂದ್ರರವರು, ಚಿತ್ರತಂಡಕ್ಕೆ ಶುಭ ಕೋರಿದರು. ಕೃಷ್ಣ-ಲೀಲಾ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡುಗಳು ಮಾತ್ರ ಬಾಕಿ ಉಳಿದಿವೆ. ವಿ.ಶ್ರೀಧರ್ ಸಂಗೀತವಿರುವ ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನವೆಂಬರ್ ಎರಡನೇ ವಾರದಲ್ಲಿ ಹಾಡುಗಳು ಬಿಡುಗಡೆಯಾಗಲಿವೆ. ಚಿತ್ರದ ತಾರಾಬಳಗದಲ್ಲಿ ನಾಯಕ ಅಜಯ್‌ರಾವ್, ನಾಯಕಿ ಮಯೂರಿ ಜೊತೆಗೆ ರಂಗಾಯಣ ರಘು, ಅಚ್ಯುತ್‌ಕುಮಾರ್, ಶೋಬ್‌ರಾಜ್, ತಬಲಾನಾಣಿ, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed